ಸೋಫಿಯಾ ಬೆತ್ತಲೆ ಬೆನ್ನ ಮೇಲೆ ಕ್ರಿಕೆಟ್ ವರ್ಲ್ಡ್ ಕಪ್!
ಮುಂಬೈ, ಮಾ. 4: ಕ್ರಿಕೆಟ್ ವಿಶ್ವ ಕಪ್ ಅನ್ನು ಬೆನ್ನಿಗೇರಿಸಿಕೊಂಡು, ಪಾಲ್ ಅಕ್ಟೋಪಸ್ ಅನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತೀಯ ಮೂಲದ ಸೋಫಿಯಾ ಹಯಾತ್ ಎಂಬ ಮಾಡೆಲ್ ಕಮ್ ನಟಿ ತನ್ನ ಕ್ರೀಡಾಪ್ರೇಮವನ್ನು ಭರ್ಜರಿಯಾಗಿಯೇ ತೆರೆದಿಟ್ಟಿದ್ದಾಳೆ. 'ಡೈರಿ ಆಫ್ ಎ ಬಟರ್‌ಫ್ಲೈ' ಎಂಬ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿರುವ ಬ್ರಿಟನ್‌ನಲ್ಲಿ ನೆಲೆಸಿರುವ ಸೋಫಿಯಾಗೆ ವಿಶ್ವ ಕಪ್ ಕ್ರಿಕೆಟ್ ಜ್ವರ ಸರಿಯಾಗಿಯೇ ಮೈಗೆ ತಾಕಿದೆ. ಮುಂಬೈನ ಸುಪ್ರಸಿದ್ದ ಶಿವಾ ಸೆಲೂನ್ ನಲ್ಲಿ ಪಟ್ಟಾಗಿ ಕುಳಿತ ಈ ಬೆಡಗಿ ಕೇಶವಿನ್ಯಾಸ ಮಾಡಿಸಿಕೊಂಡಿರುವುದನ್ನು ನೋಡಿದರೆ ನೀವು ತಲೆದೂಗಲೇ ಬೇಕು.
ಇನ್ನು, ಪಾಲ್ ಅಕ್ಟೋಪಸ್ ಅನ್ನು ಯಾರಿಗೆ ತಾನೆ ಮರೆಯಲು ಸಾಧ್ಯ? ವಿಶ್ವ ಕಪ್ ಫುಟ್ಬಾಲ್‌ಮ ನಿಜವಾದ ಹೀರೊ. ತಾನೂ ಪಾಲ್ ಅಕ್ಟೋಪಸ್ ಅಂತೆ ಭವಿಷ್ಯ ನುಡಿಯುತ್ತೇನೆ, ಕೇಳಿ. ಈ ಬಾರಿ ಕ್ರಿಕೆಟ್ ವಿಶ್ವ ಕಪ್ ಭಾರತೀಯರಿಗೆ ಗ್ಯಾರಂಟಿ ಎಂದು ಈ ಬೆಡಗಿ ಶಕುನ ನುಡಿದಿದ್ದಾಳೆ. ಅದಕ್ಕಾಗಿ
ಇನ್ನು ಆಕೆಯ ಬೆನ್ನನ್ನು ನೋಡಿದರೆ ನೀವು ಎಚ್ಚರ ತಪ್ಪುವುದು ಗ್ಯಾರಂಟಿ. ಆ ಪಾಟಿ ಕ್ರಿಕೆಟ್ ಜ್ವರ ಆಕೆಯನ್ನು ಆವರಿಸಿಕೊಂಡಿದೆ. ಹಚ್ಚೆ ರೂಪದಲ್ಲಿ ವಿಶ್ವ ಕಪ್ ಅನ್ನು ಆಗಲೇ ಬೆನ್ನಿಗೇರಿಸಿಕೊಂಡಿದ್ದಾಳೆ. ಮಾರ್ಚ್ 2ರಂದು ಸೋಫಿಯಾ ಈ ಅವತಾಳ ತಾಳಿದ್ದು, ಈ ಬಾರಿ ವಿಶ್ವ ಕಪ್ ಅನ್ನು ಭಾರತವೇ ಗೆಲ್ಲಬೇಕು ಎಂದು ಹಾರೈಸಿದ್ದಾಳೆ. 'ಜೀತ್ ಲೊ ಇಂಡಿಯಾ' ಎಂಬ ಬೀಜಮಂತ್ರವನ್ನು ಖ್ಯಾತ ಟ್ಯಾಟೂ ಸ್ಪೆಷಲಿಸ್ಟ್ ಮುಂಬಯಿ ಸುರೇಶ್ ಈಕೆಯ ಬೆನ್ನ ಮೇಲೆ ಕೆತ್ತಿದ್ದಾರೆ. ಒಮ್ಮೆ ನೀವೂ ನೋಡಿ!