Keblinger

Keblinger
| Friday, March 4, 2011
ಬೆಂಕಿಯಲ್ಲಿ ಅರಳಿದ "ನ್ಯಾನೊ"; ಮತ್ತೆ ಬೆಂಕಿ!!!


ಮತ್ತೊಂದು ನ್ಯಾನೊ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಂಪನಿ ಮತ್ತು ಗ್ರಾಹಕರಿಬ್ಬರಿಗೂ ಷಾಕ್ ನೀಡಿದೆ. ಅಹಮದಾಬಾದ್ ನ ಶಿವಾನಜ್ನಿ ಅಡ್ಡರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ನ್ಯಾನೊ ಕಾರ್ ಮಾಲೀಕರೊಬ್ಬರು ತನ್ನ ಪುಟ್ಟ ಕಾರ್ ನ್ಯಾನೊವಿನಲ್ಲಿ ಮನೆಗೆ ತೆರಳುತ್ತಿದ್ದಾಗ ಆ ಕಾರಿನ ಹಿಂಭಾಗ ಅಂದರೆ ಎಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಕಳೆದ ಮೇ ತಿಂಗಳಿನಲ್ಲಿ ಅವರು ನ್ಯಾನೋ ಖರೀದಿಸಿದ್ದರು. ಎಂಜಿನ್ ಭಾಗದಲ್ಲಿ ತನ್ನಷ್ಟಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಈ ಕುರಿತು ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿರುವುದಾಗಿ ಅವರು ಹೇಳಿದ್ದಾರೆ. ಆದರೆ, "ಅಹಮದಾಬಾದ್ ನಲ್ಲಿ ಹಳೆಯ ನ್ಯಾನೊ ಕಾರೊಂದು ಬೆಂಕಿಗಾಹುತಿಯಾಗಿರುವುದು ನಿಜ. ಕಾರ್ ಮಾಲೀಕರು ನ್ಯಾನೊ ಕಾರಿನಲ್ಲಿ ಅನಧಿಕೃತ ಎಲೆಕ್ಟ್ರಿಕ್ ಸಾಧನಗಳನ್ನು ಅಳವಡಿಸಿದ್ದರಿಂದ ಈ ಘಟನೆ ಸಂಭವಿಸಿದೆ. ಈ ಕುರಿತು ಟಾಟಾ ಮೋಟರ್ಸ್ ತನಿಖೆ ಮಾಡಲಿದೆ. ಈಗ ನ್ಯಾನೋ ಕಾರ್ ಗಳು ಸುರಕ್ಷಿತವಾಗಿದೆ" ಎಂದು ಟಾಟಾ ಮೋಟರ್ಸ್ ವಕ್ತಾರರು ಹೇಳಿದ್ದಾರೆ.
ಕಳೆದ ವರ್ಷದ ಏಪ್ರಿಲ್ ನಲ್ಲಿ ಮೊದಲ ಬಾರಿಗೆ ನ್ಯಾನೊ ಕಾರ್ ಬೆಂಕಿಗಾಹುತಿಯಾಗಿತ್ತು. ನಂತರ ಸುಮಾರು 7 ಕಾರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡು ಸುದ್ದಿಯಾಗಿತ್ತು. ಅದಕ್ಕಾಗಿ ಕಂಪನಿಯು 2010ರ ಸೆಪ್ಟಂಬರ್ ನಿಂದ ಅಕ್ಟೋಬರ್ ಅವಧಿಯ ನ್ಯಾನೊ ಕಾರ್ ಗಳನ್ನು ಪರಿಶೀಲಿಸಿ ಸುರಕ್ಷಿತವಾಗಿರುವುದನ್ನು ಖಾತರಿ ಪಡಿಸಿಕೊಂಡಿತ್ತು. ಬೆಂಕಿ ಕಾಣಿಸಿಕೊಂಡ ಪ್ರಕರಣಗಳ ನಂತರ ನ್ಯಾನೊ ಮಾರಾಟದಲ್ಲಿ ಭಾರೀ ಹಿನ್ನಡೆಯಾಗಿತ್ತು. ನಂತರ ಕಂಪನಿಯು ಮಾರಾಟ ಹೆಚ್ಚಿಸಲು ಹತ್ತುಹಲವು ಪ್ರಯತ್ನಗಳನ್ನು ಮಾಡಿತ್ತು.
 

Copyright © 2010 ರಾಷ್ಟ್ರೀಯ ಸುದ್ದಿ